VISION AND MISSION - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

VISION AND MISSION

ಸಂಘದ ಉದ್ದೇಶಗಳು 

ಈ ಸಂಘದ ಉದ್ದೇಶಗಳನ್ನು ಕರ್ನಾಟಕ ಸಂಘಗಳನೊಂದಣಿ ಕಾಯ್ದೆ 1960 ಕಲಂ 3 ರ ಅನುಗುಣವಾಗಿ ರಚಿಸಲಾಗಿದ್ದು ಈ ಕೆಳಗೆ ತೋರಿಸಿದ ಸಂಘದ ಉದ್ದೇಶಗಳು ಸದರಿ ನೋಂದಣಿ ಕಾಯ್ದೆಗೆ ಅನುಗುಣವಾಗಿರುತ್ತದೆ. 

  1. ಸಂಘವು ಅಭಿರುದ್ಧಿಪರ ಚಿಂತಕರ, ಬುದ್ಧಿಜೀವಿಗಳ, ಸಾಮಾಜಿಕ ಕಳಕಳಿ ಇದ್ದ, ಜನಪರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ರಚಿಸಿದ ಒತ್ತಡದ ಗುಂಪಾಗಿದೆ.
  2. ಉತ್ತರ ಕರ್ನಾಟಕದ ಕೃಷಿ ನೀರಾವರಿ, ಕೈಗಾರಿಕೆ, ಐಟಿ- ಬಿಟಿ, ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ, ವಸತಿ ಸೌಕರ್ಯ ಮುಂತಾದ ಅಭಿವೃದ್ಧಿಯ ವಿಷಯದಲ್ಲಿ ಉಂಟಾಗಿರುವ ಅಸಮತೋಲನೆಗಳನ್ನು ಹೋಗಲಾಡಿಸಿ ಉತ್ತರಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿದೆ.
  3. ಉತ್ತರಕರ್ನಾಟಕದ ಸಮಗ್ರ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಅಸಮತೋಲತೆಯನ್ನು ವಿವರಿಸಿ ಜನಜಾಗೃತಿ ಮಾಡುವುದಾಗಿದೆ.
  4. ಸಂಘದ ವತಿಯಿಂದ ಉತ್ತರಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಹಕ್ಕೊತ್ತಾಯಗಳನ್ನು ಪ್ರಚುರಪಡಿಸುವುದು, ಸಾದರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಸಂಬಂಧಿಸಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳೊಂದಿಗೆ ಪತ್ರವ್ಯವಹಾರ ಮಾಡುತ್ತ ಅವಶ್ಯಕತೆಗೆ ತಕ್ಕಂತೆ ಒತ್ತಡ ತರುವುದಕ್ಕಾಗಿ ಸಾರ್ವಜನಿಕ ಅಭಿಪ್ರಾಯಗಳನ್ನು ಮೂಡಿಸುವುದು ಹಾಗು ಅವುಗಳ ಈಡೇರಿಕೆಗಾಗಿ ಶ್ರಮಿಸುವುದು.
  5. ಸಂಘದ ವತಿಯಿಂದ ಉತ್ತರಕರ್ನಾಟಕದ ಕೃಷಿ ನೀರಾವರಿ, ಕೈಗಾರಿಕೆ, ಐಟಿ- ಬಿಟಿ, ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ, ವಸತಿ ಸೌಕರ್ಯ ಮತ್ತು ಗುಡಿ ಕೈಗಾರಿಕೆ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುವುದು.
  6. ಉತ್ತರಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರ, ಮಹಾನಗರ ಪಾಲಿಕೆ, ತಾಲೂಕು ಕೇಂದ್ರ ಹಾಗು ಪ್ರಮುಖ ನಗರ, ಪಟ್ಟಣಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಪಡಿಸಲು ಪ್ರಯತ್ನಿಸುವುದು
  7. ಉತ್ತರಕರ್ನಾಟಕದ ಗ್ರಾಮಾಂತರ ಪ್ರದೇಶ, ನಗರ, ಪಟ್ಟಣಗಳು ಹಾಗು ತಾಲೂಕು, ಜಿಲ್ಲಾ ಕೇಂದ್ರ, ಮಹಾನಗರ ಪಾಲಿಕೆ, ಮಾಲಿನ್ಯ ರಹಿತವಾಗಿ, ಹಸಿರುವಲಯಗಳಿಂದ ಕೂಡಿದ ಸ್ವಚ್ಛ, ಸುಂದರ ಪ್ರದೇಶಗಳಾಗುವಂತೆ ಪ್ರಯತ್ನಿಸುವುದು.
  8. ಉತ್ತರ ಕರ್ನಾಟಕದಲ್ಲಿ ಬರುವ ಎಲ್ಲ ಸ್ಥಾನಿಕ ಸಂಸ್ಥೆಗಳು ಶಾಶ್ವತ ಕಸವಿಲೇವಾರಿ ಮರು ಉಪಯೋಗಗಳ ವ್ಯವಸ್ಥೆ ಜಾರಿಗೆ ತರುವಂತೆತರುವಂತೆ ಪ್ರಯತ್ನಿಸುವುದು
  9. ಪ್ರಯತ್ನಗಳಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆ ಹಾಗು ಅವರ ತಿಳುವಳಿಕೆ ಹೆಚ್ಚಿಸಿ ಅವರವರ ಕರ್ತ್ಯವ್ಯ ಹಾಗು ಜವಾಬ್ದಾರಿಗಳನ್ನು ತಿಳಿಸುವುದು.
  10. ಮಕ್ಕಳ ಖಡ್ಡಾಯ ಶಿಕ್ಷಣದ ಬಗ್ಗೆ ಪಾಲಕರಿಗೆ ಮನವರಿಕೆ ಮಾಡುವುದು. " ಶಿಕ್ಷಣದ ಹಕ್ಕನ್ನು" ಪ್ರಚುರಪಡಿಸುವುದು( ಆರ್.ಟಿ. )
  11. ಕೇಂದ್ರೀಯ ಪಠ್ಯಕ್ರಮ ಹಾಗು ರಾಜ್ಯ ಪಠ್ಯಕ್ರಮದ ಮತ್ತು ಇತರೆ ಪಠ್ಯಕ್ರಮದ ಅನ್ವಯ ಅನುದಾನಿತ/ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಸರ್ಕಾರದ ನಿಯಂತ್ರಣಕ್ಕೆ ಒತ್ತಾಯಿಸುವುದು ಹಾಗು ಶಿಕ್ಷಣದ ವ್ಯಾಪಾರೀಕರಣವನ್ನು ವಿರೋಧಿಸಿ ತಡೆಯಲು ಪ್ರಯತ್ನಿಸುವುದು
  12. ಉತಾರಕರ್ನಾಟಕ ಭಾಗದ ನದಿಗಳ ಜೋಡಣೆ ಹಾಗು ನೀರಾವರಿ ಅಭಿವೃದ್ಧಿಗಾಗಿ ಒತ್ತಾಯಿಸುವುದು, ವ್ಯರ್ಥವಾಗಿ ಹರಿದು ಹೋಗುವ ಹಳ್ಳಗಳ ನೀರನ್ನು ತಡೆಹಿಡಿದು ಕುಡಿಯುವ ನೀರಿಗಾಗಿ ಮತ್ತು ಕೃಷಿಗೆ ಉಪಯೋಗಿಸುವಂತೆ ಕ್ರಮ ವಹಿಸಲು ಒತ್ತಾಯಿಸುವುದು. 
  13. ಅನಿಷ್ಟ ಪದ್ಧ್ಯತಿಯಾದ "ದೇವದಾಸಿ" ಪಾದ್ಧ್ಯತಿ ಯನ್ನು ಹೋಗಲಾಡಿಸಲು ಪ್ರಯತ್ನಿಸುವುದು. ಸಾರ್ವಜನಿಕರಿಗೆ ಮೂಢನಂಬಿಕೆ ವಿರೋಧಿ ಜಾಗೃತಿ ಅಭಿಯಾನದ ಮೂಲಕ ವೈಜ್ಞಾನಿಕ ಮನೋಭಾವನೆ ಬೆಳೆಸಲು  ಪ್ರಯತ್ನಿಸುವುದು
  14. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ , ಸ್ಥಾನಿಕ ಸಂಸ್ಥೆಗಳಿಂದ  ಹಾಗು ಶಾಸಕ, ಸಂಸದರ ನಿಧಿಯಲ್ಲಿ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದು ಕೊಳ್ಳುವಂತೆ ಒತ್ತಾಯಿಸುವುದು. ನಾವು/ ನಾಗರಿಕರು ಫಲಾನುಭವಿಗಳು ಆಗಿರುವುದರಿಂದ ತೃತೀಯ ಪಕ್ಷದ ಗುಣ ನಿಯಂತ್ರಣ ವ್ಯವಸ್ಥೆಗೆ ಒತ್ತಾಯಿಸುವುದು.
  15. ಸಂಘದ ಸಲಹಾ ಮಂಡಳಿಯಲ್ಲಿರುವ ಪರಿಣಿತರನ್ನೊಳಗೊಂಡ " ಗುಣ ನಿಯಂತ್ರಣ ಮಂಡಳಿ" ರಚಿಸಿ ಅಭಿವೃದ್ಧಿ ಕಾರ್ಯಗಳ ವೈಜ್ಞಾನಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಪ್ರಯತ್ನಿಸುವುದು 
  16. ಆಡಳಿತದಲ್ಲಿ ಎಲ್ಲ ಹಂತಗಳಲ್ಲಿ " ಕನ್ನಡ ಭಾಷೆ " ಜಾರಿಗೊಳಿಸಲು ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸುವುದು. ಸಮಗ್ರ ಕರ್ನಾಟಕಡಾ ಭಾವನೆಗೆ ಚ್ಯುತಿಬಾರದಂತೆ ಕನ್ನಡ ನಾಡಿನ ನೆಲ, ಜಲ ಹಾಗು ಭಾಷೆ ಇವುಗಳ ಸಮಗ್ರ ಅಭ್ಯುದಯ ಹಾಗು ಬೆಳವಣಿಗೆಗೆ ಶ್ರಮಿಸುವುದು
  17. ಭ್ರಷ್ಟಾಚಾರ ನಿರ್ಮೂಲನೆಗಾಗಿ ಜನ ಜಾಗೃತಿ ಕಾರ್ಯಕ್ರಮ ಹಾಕಿಕೊಂಡು ಭ್ರಷ್ಟಾಚಾರ ನಿರ್ಮೂಲನೆಗಾಗಿ ಶ್ರಮಿಸುವುದು 
  18. ಸಂಘದ ವತಿಯಿಂದ ಮಕ್ಕಳ ಹಾಗು ಸಮಾಜ ಶೈಕ್ಷಣಿಕ ಸೌಲಭ್ಯಕ್ಕಾಗಿ ಶಿಶು ವಿಹಾರ, ಪ್ರಾಥಮಿಕ ಶಾಲೆಗಳನ್ನು, ಹೈಸ್ಕೂಲ್ , ಕಾಲೇಜು ಹಾಗು ವೈದ್ಯಕೀಯ, ತಾಂತ್ರಿಕ  ಕಾಲೇಜುಗಳನ್ನು ನಡೆಸುವುದು ಮತ್ತು ಮಕ್ಕಳಿಗೆ ಬಾಲವಾಡಿ, ಪೂರ್ವ ಬುನಿಯಾದಿ ಶಿಕ್ಷಣವನ್ನು ಕೊಡಲು ಏರ್ಪಾಡು ಮಾಡುವುದು
  19. ಸಂಘಡಾ ವತಿಯಿಂದ ವೃತ್ತಿ ಶಿಕ್ಷಣ ಅಂದರೆ ಕರಕುಶಲ ಹಾಗು ಕುಟಿರ ಕೈಗಾರಿಕೆಗಳಲ್ಲಿ ತರಬೇತಿ ಕೊಡಲು ಏರ್ಪಾಡು ಮಾಡುವುದು, ಸಂಗೀತ, ನೃತ್ಯ , ಚಿತ್ರಕಲೆ, ಮೊದಲಾದ ಲಲಿತಕಲೆ ಶಿಕ್ಷಣ ಸೌಕಾರ್ಯಗಳನ್ನು ಒದಗಿಸುವುದು .
  20. ಸಂಘದ ವತಿಯಿಂದ ಸ್ವಂತ ಉದ್ಯೋಗಗಳಾದ ಟೇಲರಿಂಗ್, ಟೈಪಿಂಗ್, ಶಾರ್ಟ್ ಹ್ಯಾಂಡ್, ಕಂಪ್ಯೂಟರ್, ಗುಡಿ ಕೈಗಾರಿಕೆ ಮೂಲ ಮತ್ತಿತರ ಪ್ರಾಣಿಗಳ ಸಾಕಾಣಿಕೆ ಮತ್ತು ಗೃಹ ಕೈಗಾರಿಕೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವುದು ಹಾಗು ತರಬೇತಿ ಕೊಡುವುದು.
  21. ಸಂಘದ ವತಿಯಿಂದ ಸಾಕ್ಷರತಾ ಆಂದೋಲನವನ್ನು ಹಮ್ಮಿಕೊಳ್ಳುವುದು ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಬಗ್ಗೆ ಆದ್ಯತೆ ಕೊಡುವುದು ಹಾಗು ಸಂಘದ ವತಿಯಿಂದ ಗ್ರಾಮ ಮತ್ತು ನಗರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  22. ಸಂಘದ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ವಾಚನಾಲಯ ಮತ್ತು ಪುಸ್ತಕ ಭಂಡಾರಗಳನ್ನು ಸ್ಥಾಪಿಸುವುದು ಮತ್ತು ನಡೆಸುವುದು.
  23. ಸಂಘದ ವತಿಯಿಂದ ಹಬ್ಬ ಹರಿದಿನಗಳಲ್ಲಿ, ಮಾಡುವೆ ಮಂಜುವೆ ಕಾರ್ಯಕ್ರಮಗಳ ವೇಳೆಯಳ್ಳಿ ಮತ್ತು ಶವ ಸಂಸ್ಕಾರದ ವೇಳೆಯಲ್ಲಿ ಏಕತೆಯಿಂದ ಒಗ್ಗಟ್ಟಿನಿಂದ ಭಾಗವಹಿಸುವುದು .
  24. ಸಂಘದ ವತಿಯಿಂದ ಸಾಮಾಜೀಕ , ಸಾಂಸ್ಕೃತಿಕ ರಾಷ್ಟ್ರೀಯ ಕ್ರೀಡಾ ಚಟುವಟಿಕೆಗಳಾದ ಕೇರಂ, ಚೆಸ್, ಕ್ರಿಕೆಟ್, ಕಬ್ಬಡ್ಡಿ ಮುಂತಾದವುಗಳ ಬಗ್ಗೆ ತರಬೇತಿ ಕೊಡಲು ಏರ್ಪಾಡು ಮಾಡುವುದು ಮತ್ತು ನಡೆಸುವುದು, ಗ್ರಾಮೀಣ ಕ್ರೀಡೆಗಳಿಗೆ ಪ್ರೂತ್ಸಾಹ ಕೊಟ್ಟು ಅವುಗಳನ್ನು ಅಭಿವೃದ್ಧಿಪಡಿಸುವುದು.
  25. ಸಂಘದ ವತಿಯಿಂದ ಗಿಡ  ಮರಗಳನ್ನು ಬೆಳೆಸಿ  ಸಂರಕ್ಷಣೆ ಮಾಡುವುದು ಹಾಗು ಸಂಘದ ವತಿಯಿಂದ  ರೈತರ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗು ಹೈನುಗಾರಿಕೆ, ಕೂಲಿ, ಕುರಿ, ರೇಷ್ಮೆ, ಜೇನು ಸಾಗಾಣಿಕೆ ಮುಂತಾದವುಗಳ ಬಗ್ಗೆ ತರಬೇತಿ ಕೊಡುವುದು
  26. ಸಮೀತಿಯ ಧೇಯೋದ್ದೇಶಗಳನ್ನು ಪ್ರಸಾರ ಮಾಡಲು ಪತ್ರಕೆ ನಡೆಸುವುದು
  27. ಸಂಘದ ವತಿಯಿಂದ ಮಾತೃ ಭಾಷೆಯಲ್ಲಿ  ಕಲಿಕೆಯ ಬಗ್ಗೆ  ನೀಡುವುದು ಹಾಗು ಸಂಘದ ವತಿಯಿಂದ ಸದಸ್ಯರಿಗೆ ಹಾಗು ಸಾರ್ವಜನಿಕರಿಗೆ ಉಳಿತಾಯ ಮನೋಭಾವನೆ ಮೂಡಿಸುವುದು 
  28. ಸಂಘದ ವತಿಯಿಂದ ಕೃಷಿ ಹಾಗು ಕೃಷಿ ಕೆಲಸಕ್ಕೆ ಅಗತ್ಯವಿರುವ ಯಾವತ್ತೂ ಸಾಮಗ್ರಿಗಳ ಬಗ್ಗೆ ಮಾಹಿತಿ ನೀಡುವುದು ಹಾಗು ಗಿಡ, ಮರ, ಸಸಿಗಳಿಗೆ ಬೇಕಾಗುವ ಯಾವತ್ತೂ ಗೊಬ್ಬರಗಳ ಬಗ್ಗೆ ಹೆವಿಹ್ವಹಿನ ಮಾಹಿತಿ ಕೊಡುವುದು
  29. ಸಂಘದ ವತಿಯಿಂದ ಸಂಘದ ಸದಸ್ಯರಲ್ಲಿ ಯಾವುದೇ  ರೀತಿಯಿಂದ ತೊಂದರೆ ಉಂಟಾದಲ್ಲಿ ಅವುಗಳನ್ನು ಕಾನೂನಿನ ರೆಟಿಯಿಂದ ಬಗೆಹರಿಸಿಕೊಳ್ಳುವುದು
  30. ಸಂಘದ ಆದಾಯವು ಅದು ಯಾವುದೇ ಮೂಲದಿಂದ ಬಂದಿರಲಿ ಅದನ್ನು ಸದಸ್ಯರಲ್ಲಾಗಲಿ ಅಥವಾ ಬೇರೆಯವರಲ್ಲಾಗಲಿ ವಿತರಣೆ ಮಾಡಕೂಡದು ಮತ್ತು ಸಂಘದ ಉದ್ದೇಶಗಳಿಗಾಗಿಯೇ ಉಪಯೋಗಿಸತಕ್ಕದ್ದು

Post Top Ad

Responsive Ads Here