ಶೀಘ್ರದಲ್ಲೇ ಪ್ರಾದೇಶಿಕ ಪಕ್ಷ ರಚನೆ ನಾಗೇಶ ಗೋಲಶೆಟ್ಟಿ ಹೇಳಿಕೆ : - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಶೀಘ್ರದಲ್ಲೇ ಪ್ರಾದೇಶಿಕ ಪಕ್ಷ ರಚನೆ ನಾಗೇಶ ಗೋಲಶೆಟ್ಟಿ ಹೇಳಿಕೆ :

ಶೀಘ್ರದಲ್ಲೇ ಪ್ರಾದೇಶಿಕ ಪಕ್ಷ ರಚನೆ ನಾಗೇಶ ಗೋಲಶೆಟ್ಟಿ ಹೇಳಿಕೆ :
ಗದಗ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಅದರ ಜೊತೆಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದ್ದು ಶೀಘ್ರದಲ್ಲೇ ಪ್ರಾದೇಶಿಕ ಪಕ್ಷ ರಚನೆ ಮಾಡುತ್ತೇವೆ ಮತ್ತು ಅದಕ್ಕಾಗಿ ಹಲವಾರು ಜನರ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿದ್ದೇವೆ ನಂತರ ಪ್ರಾದೇಶಿಕ ಪಕ್ಷ ರಚನೆಯ ಬಗ್ಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ .
ನಮ್ಮ ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶ ವಾಗಿದೆ , ಉದಾಹರಣೆಗೆ ರೈಲು ಸಂಪರ್ಕ ರಸ್ತೆ ಸಂಪರ್ಕ , ಕುಡಿಯುವ ನೀರು , ವೃತ್ತಿ ರಂಗಭೂಮಿ , ಕ್ರೀಡೆ, ಔದ್ಯೋಗಿಕ , ಸಾಮಾಜಿಕ , ಕೈಗಾರಿಕೆ , ಶಿಕ್ಷಣ , ಆರ್ಥಿಕವಾಗಿಯೂ ಮತ್ತು ಭೌಗೋಳಿಕವಾಗಿಯೂ ಹಾಗೂ ಎಲ್ಲಾ ವಿವಿಧ ರಂಗಗಳಲ್ಲಿ ನಾವು ಹಿಂದುಳಿದಿದ್ದೇವೆ .
ಉತ್ತರ ಕರ್ನಾಟಕದ ಹಲವಾರು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಸರಿಯಾದ ಮಳೆ ಇಲ್ಲ , ತೀವ್ರ ಬರಗಾಲ ಆವರಿಸಿದೆ , ನಮ್ಮ ಉತ್ತರ ಕರ್ನಾಟಕದ ರೈತರು ಗುಳೆ ಹೋಗುತ್ತಿದ್ದಾರೆ , .
ಇದನ್ನೆಲ್ಲ ತಡೆಯಬೇಕಾದರೆ ನಮ್ಮಲ್ಲಿ ಒಂದು ದೊಡ್ಡ ಶಕ್ತಿ ಬೇಕಾಗುತ್ತದೆ , ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದರೆ ರಾಜಕೀಯ ಪಕ್ಷ ಅವಶ್ಯವಾಗಿದೆ , ಆದ್ದರಿಂದ ಉತ್ತರ ಕರ್ನಾಟಕ ಪಕ್ಷ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದೇವೆ .
ಉತ್ತರ ಕರ್ನಾಟಕ ಸಾಕಷ್ಟು ಭಾರಿ ಅನ್ಯಾಯವಾಗಿದೆ ಇದರ ಬಗ್ಗೆ ಶ್ರೀ ಎಸ್ ಎಂ ಜಾಮದಾರ್ ಅವರು ತಾರತಮ್ಯ ಎಂಬ ಪುಸ್ತಕವನ್ನು ರಚಿಸಿದ್ದಾರೆ ಇದನ್ನೆಲ್ಲ ಸಾರ್ವಜನಿಕರು ಓದಬೇಕು ಎಂದರು .
ನೂತನವಾಗಿ ನೇಮಕಗೊಂಡ ಶ್ರೀ ಎಸ್ಎಸ್ ರೆಡ್ಡೇರ ಮಾತನಾಡಿ ಈ ಮೊದಲೇ ನಮಗೆ ಉತ್ತರ ಕರ್ನಾಟಕದ ಬಗೆಗೆ ಹೆಚ್ಚಿನ ಆಸಕ್ತಿ ಇತ್ತು , ಹಲವಾರು ಬಾರಿ ಈ ಹಿಂದೆ ನಾವು ಹಲವು ಜನಪರ ಕೆಲಸಗಳನ್ನು ಮಾಡಿದ್ದೇವೆ , ನಮ್ಮನ್ನು ನೂತನವಾಗಿ ಉತ್ತರ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ನನಗೆ ಬಹಳ ಖುಷಿ ತಂದಿರುವ ವಿಚಾರ , ಈ ಬಗ್ಗೆ ನಾನು ಉತ್ತರ ಕರ್ನಾಟಕ ಹೋರಾಟ ಸಮಿತಿಯ ನಾಗೇಶ್ ಗೋಲಶೆಟ್ಟಿ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತೇನೆ .
ನೂತನವಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಗದಗ ಜಿಲ್ಲೆಯ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀ ಎಸ್ ಎನ್ ಮುಳುಗುಂದ ಮಾತನಾಡಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ನಾವು ಹಲವಾರು ಬಾರಿ ಈ ಬಗ್ಗೆ ಹೋರಾಟ ಮಾಡಿದ್ದೇವೆ , ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲೇಬೇಕು ಈ ಬಗ್ಗೆ ಅಭಿಯಾನವನ್ನು ಕೂಡ ಹಮ್ಮಿಕೊಂಡಿದ್ದೇವೆ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ನನ್ನನ್ನು ಉತ್ತರ ಕರ್ನಾಟಕ ಹೋರಾಟ ಸಮಿತಿ ಗದಗ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ನನಗೆ ತುಂಬಾ ಸಂತೋಷವಾಗಿದೆ .
ಇದಕ್ಕೆ ಕಾರಣರಾದ ಶ್ರೀ ನಾಗೇಶ್ ಗೋಲಶೆಟ್ಟಿ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ .
ಉತ್ತರ ಕರ್ನಾಟಕ ಹೋರಾಟ ಸಮಿತಿಯ ನೂತನ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಂತಹ ಸಂದೀಪ್ ಉಕ್ಕಲಿ ಮಾತನಾಡಿ ನಮ್ಮ ಉತ್ತರ ಕರ್ನಾಟಕ ಭೌಗೋಳಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶಗ ವಾಗಿದ್ದು , ಅಭಿವೃದ್ಧಿ ಎನ್ನುವುದು ಕೇವಲ ಕನಸಾಗಿದೆ.
ನಾನು ಈಗಾಗಲೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ , ಸಾಕಷ್ಟು ಹಳ್ಳಿಗಳು ಕುಗ್ರಾಮಗಳಾಗಿ ವೆ , ಕುಡಿಯುವ ನೀರು ರಸ್ತೆ ಸಂಪರ್ಕ ಕರೆಂಟ್ ಸಂಪರ್ಕ ಹಾಗೂ ಇನ್ನೂ ಹಲವರು ಮೂಲಭೂತ ಸೌಕರ್ಯಗಳಿಂದ ವಂಚನೆಗೆ ಒಳಪಟ್ಟಿರುತ್ತವೆ .
ಉತ್ತರ ಕರ್ನಾಟಕದ ಯಾವುದೇ ಒಂದು ಭಾಗವೂ ಕೂಡ ಸ್ಮಾರ್ಟ್ ವಿಲೇಜ್ ಅಥವಾ ಸ್ಮಾರ್ಟ್ ಸಿಟಿ ಆಗಲೇ ಇಲ್ಲ .
ಇಂತಹ ಹಲವಾರು ಸನ್ನಿವೇಶಗಳನ್ನು ನೋಡಿ ನಮಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ದೃಢ ಸಂಕಲ್ಪ ತೊಟ್ಟಿದ್ದೇನೆ ಎಂದರು . ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದೇನೆ ಎಂದರು .
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಮಾಜಿಕ ಜಾಲತಾಣಗಳ ಮುಖ್ಯಸ್ಥ ಪವನ್ ವಾಲಿ ಮಾತನಾಡಿ ನಮ್ಮ ಉತ್ತರ ಕರ್ನಾಟಕ ಬಹಳಷ್ಟು ಹಳೆಯ ಇತಿಹಾಸ ಹೊಂದಿದೆ . ಕ್ರಿಸ್ತಶಕ 618 ನೇ ಶತಮಾನದಲ್ಲಿ ನರ್ಮದಾ ನದಿಯ ದಡದಲ್ಲಿ ನಡೆದಂತಹ ಘೋರ ಯುದ್ಧದಲ್ಲಿ ಶಾಲೆ ಗಳಿಸಿದ ನಮ್ಮ ಬಾದಾಮಿಯ ಚಾಲುಕ್ಯರು ಅರ್ಧ ಭಾರತ ದೇಶವನ್ನು ಗೆದ್ದರು . ಸುಮಾರು 150 ವರ್ಷಗಳ ಕಾಲ ಬಾದಾಮಿಯು ದಕ್ಷಿಣ ಭಾರತದ ರಾಜಧಾನಿ ಆಗಿತ್ತು .
ಅತಿ ದೊಡ್ಡ ಇತಿಹಾಸ ಹೊಂದಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಆಗುವುದರಲ್ಲಿ ಯಾವುದೇ ತಪ್ಪಿಲ್ಲ .
ಆದರೆ ದಕ್ಷಿಣ ಕರ್ನಾಟಕದ ಹಲವರು ಉತ್ತರ ಕರ್ನಾಟಕದ ಮೇಲೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ .
ಉದಾಹರಣೆಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ , ಏನಂದರೆ ಬೆಂಗಳೂರಿನ ಆದಾಯದಲ್ಲಿ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಬಳಸುತ್ತಿದ್ದೇವೆ ಎಂಬ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ .
ಉತ್ತರ ಕರ್ನಾಟಕಕ್ಕೆ ದಕ್ಷಿಣ ಕರ್ನಾಟಕದ ಯಾವುದೇ ಒಂದು ಭಾಗದ ಆದಾಯವೂ ನಮಗೆ ಬೇಕಿಲ್ಲ . ಉತ್ತರ ಕರ್ನಾಟಕ ಭಾಗದ ಜನರು ಬಹಳಷ್ಟು ಸ್ವಾಭಿಮಾನಿಗಳು , ಪರರ ಹಾಸಿಗೆಯಲ್ಲಿ ಕಾಲು ಚಾಚುವ ಬುದ್ದಿ ನಮಗೆ ಬಂದಿಲ್ಲ ಬರುವುದಿಲ್ಲ , ಉತ್ತರ ಕರ್ನಾಟಕಕ್ಕೆ ಸ್ವಾತಂತ್ರ್ಯ ಬೇಕಾಗಿದೆ ಆದ್ದರಿಂದ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ವಿನಂತಿಸುತ್ತೇವೆ .
ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕ ಭಾಗದ ಜನರನ್ನು ಕಡೆಗಣಿಸುತ್ತಿದ್ದಾರೆ , ನನಗೂ ಕೂಡ ಈ ವಿಷಯ ಬಹಳ ಬೇಸರ ತಂದಿದೆ ಎಂದು ತಿಳಿಸಿದರು.

Post Top Ad

Responsive Ads Here