ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ..ಎರಡು ಕರ್ನಾಟಕ ಆಗೋದು ಅನಿವಾರ್ಯ ..! - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ..ಎರಡು ಕರ್ನಾಟಕ ಆಗೋದು ಅನಿವಾರ್ಯ ..!

ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಎಚ್ಚರಿಕೆ
ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಹೀಗೆ ಮುಂದುವರೆದರೆ ಉತ್ತರ ಕರ್ನಾಟಕ ಪ್ರತ್ಯೆಕ ರಾಜ್ಯದ ಕೂಗಿಗೆ ಎಲ್ಲರ ಧ್ವನಿಗೂಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹಿರಿಯ ಪತ್ರಕರ್ತ ನಾಡೋಜ ಪಾಟೀಲ್ ಪುಟ್ಟಪ್ಪ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಮೈಸೂರು ಭಾಗದವರೇ ಹೆಚ್ಚಿನ ಸಚಿವರು ಇದ್ದಾರೆ. ಉತ್ತರ ಕರ್ನಾಟಕದ ಶಾಸಕರನ್ನ ಕಡೆ ಗಣಿಸಿ ಮೈಸೂರು ಬಾಗದ ಸಚಿವರಿಗೆ ಸ್ಥಾನ ನೀಡುವ ಮೂಲಕ ಉತ್ತರ ಕರ್ನಾಟಕದವರಿಗೆ‌ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ ಅನುದಾನ ನೀಡುವಲ್ಲಿ ಸಹ ತಾರತಮ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮುಂದಿನ ಅಧಿವೇಶನದೊಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಎದ್ದಿರುವ ಅಸಮಾಧಾನದ ಧ್ವನಿ ಹೆಚ್ಚಾಗಬೇಕು. ನಾವು ಉತ್ತರ ಕರ್ನಾಟಕ್ಕೆ ಆಗಿರುವ ತಾರತಮ್ಯದ ವಿರುದ್ಧ ಹೋರಾಟ ಆರಂಭಿಸಬೇಕಾಗುತ್ತದೆ. ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದ್ದಲ್ಲಿ ಎರಡು ಕರ್ನಾಟಕ ಆಗೋದು ಅನಿವಾರ್ಯ ಆಗುತ್ತೇ ಎಂದು ರಾಜ್ಯ ಸರ್ಕಾಕ್ಕೆ ಎಚ್ಚರಿಕೆ ನೀಡಿದರು.

Post Top Ad

Responsive Ads Here