ಏನಿದು ಮಹದಾಯಿ ನದಿ ಸಮಸ್ಯೆ? ಓದಿ ತಿಳಿಯಿರಿ. - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಏನಿದು ಮಹದಾಯಿ ನದಿ ಸಮಸ್ಯೆ? ಓದಿ ತಿಳಿಯಿರಿ.


1. ಮಹದಾಯಿ ನದಿಯನ್ನ ಗೋವಾದಲ್ಲಿ ಮಾಂಡೋವಿ ನದಿ ಎಂದು ಕರೆಯಲಾಗುತ್ತೆ. ಗೋವಾ ರಾಜಧಾನಿ ಪಣಜಿ ಮಾಂಡೋವಿ ನದಿ ತೀರದಲ್ಲಿದೆ.
2. ಇದು ದೇಶದ ಅತ್ಯಂತ ಚಿಕ್ಕ ನದಿಗಳಲ್ಲೊಂದಾಗಿದೆ.
3. ಮಾಂಡೋವಿ ಮಳೆಯಾಶ್ರಿತ ನದಿಯಾಗಿದ್ದು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಾಗಢದಲ್ಲಿ ಹುಟ್ಟುತ್ತದೆ.
4. 35 ಕಿ.ಮೀನಷ್ಟು ದೂರ ಕರ್ನಾಟಕದಲ್ಲಿ ಮತ್ತು 52 ಕಿ.ಮೀ ನಷ್ಟು ದೂರ ಗೋವಾದಲ್ಲಿ ಹರಿದು ಬಳಿಕ ಅರೇಬಿಯನ್ ಸಮುದ್ರ ಸೇರುತ್ತದೆ.
5. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳ ಜನರು ಕುಡಿಯುವ ನೀರಿಗಾಗಿ ಮಹದಾಯಿ ನದಿಯನ್ನ ಆಶ್ರಯಿಸಿದ್ದಾರೆ.
6. 1970ರಲ್ಲಿ ಪ್ರಸಿದ್ಧ ಜಲ ತಜ್ಞ ದಿವಂಗತ ಎಸ್.ಜಿ. ಬಾಳೇಕುಂದ್ರಿಯವರು ಮೊದಲ ಬಾರಿಗೆ ಮಹದಾಯಿ ನದಿ ತಿರುವು ಯೋಜನೆ ರೂಪಿಸಿದ್ದರು.
7. ಮಹದಾಯಿ ನದಿ ನೀರು ಮಲಪ್ರಭಾ ನದಿಗೆ ಹರಿಸುವುದು ಮತ್ತು ಧಾರವಾಡ ಜಿಲ್ಲೆಯ ನವಿಲುತೀರ್ಥ ಜಲಾಶಯದಲ್ಲಿ ನೀರು ಶೇಖರಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. 1970ರಲ್ಲಿ ನಿರ್ಮಾಣಗೊಂಡಿರುವ ಈ ಜಲಾಶಯ ಮೂರ್ನಾಲ್ಕು ಬಾರಿ ಬಿಟ್ಟರೆ ಆ ಬಳಿಕ ಸಂಪೂರ್ಣ ತುಂಬಿದ ಉದಾಹರಣೆಗಳಿಲ್ಲ.
8. ಮುಂಬೈ-ಕರ್ನಾಟಕ ಭಾಗದ ಕುಡಿಯುವ ನೀರಿಗಾಗಿ ಮಹದಾಯಿ ನದಿಯಿಂದ 7.56 ಟಿಎಂಸಿ ನೀರು ಬಿಡಬೇಕೆಂಬುದು ಕರ್ನಾಟಕದ ಬೇಡಿಕೆ.
9..ಹೀಗಾಗಿ, ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿಗೆ ಬ್ಯಾರೇಜ್ ನಿರ್ಮಾಣ ಮಾಡುವುದು ಕರ್ನಾಟಕದ ಉದ್ದೇಶ.
10. ಇದರಿಂದ 180 ಹಳ್ಳಿಗಳು ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಾಗಲಿದೆ.
11. 2002ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಳಸಾ-ಬಂಡೂರಿ ಯೋಜನೆಯ ಕೆಲಸ ಆರಂಭವಾಗಿತ್ತು.
12. ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದ ಅಂದಿನ ಗೋವಾದ ಬಿಜೆಪಿ ಸರ್ಕಾರ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.
13. ಪರಿಸರದ ಕಾರಣ ನೀಡಿ ಯೋಜನೆ ರದ್ದು ಮಾಡುವಂತೆ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
14. ಆನಂತರ ನಡೆದ ಎಲ್ಲ ಸಂಧಾನ ಮಾತುಕತೆಗಳು ಮುರಿದು ಬಿದ್ದ ಬಳಿಕ 2010ರಲ್ಲಿ ಅಂದಿನ ಯುಪಿಎ-2 ಸರ್ಕಾರ ಮಹದಾಯಿ ನದಿ ನೀರು ನ್ಯಾಯಾಧಿಕರಣವನ್ನ ಸ್ಥಾಪಿಸಿತು.
15. ಮಹದಾಯಿ ನದಿಯಿಂದ 7.56 ಟಿಎಂಸಿ ನೀರು ಹರಿಸುವ ಕರ್ನಾಟಕದ ವಾದವನ್ನ ನ್ಯಾಯಾಧಿಕರಣ ತನ್ನ ಮಧ್ಯಂತರ ಆದೇಶದಲ್ಲಿ ತಿರಸ್ಕರಿಸಿತು. ಈ ಸಂದರ್ಭ ಮುಂಬೈ-ಕರ್ನಾಟಕ ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು.
16. ಕರ್ನಾಟಕಕ್ಕೆ ಮಹದಾಯಿ ನದಿ ನೀರು ಹರಿಸಲು ಅವಕಾಶ ಕೊಟ್ಟರೆ 700 ಹೆಕ್ಟೇರ್​ಗಳಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗುವ ಜೊತೆಗೆ 60,000 ಮರಗಳನ್ನ ಕಡಿಯಬೇಕಾಗುತ್ತದೆ ಎಂದು ಗೋವಾ ಸರ್ಕಾರ ವಾದಿಸಿತ್ತು.

Post Top Ad

Responsive Ads Here