ಹೊರಟ್ಟಿಯವರಿಗೂ ಪ್ರತ್ಯೇಕ ರಾಜ್ಯ ಬೇಕಂತೆ - ಉತ್ತರಕರ್ನಾಟಕ ಹೋರಾಟ ಸಮಿತಿ

Breaking

ಉತ್ತರಕರ್ನಾಟಕ ಹೋರಾಟ ಸಮಿತಿ

ಉತ್ತರಕರ್ನಾಟಕ ಹೋರಾಟ ಸಮಿತಿ

students

Post Top Ad

Responsive Ads Here

ಹೊರಟ್ಟಿಯವರಿಗೂ ಪ್ರತ್ಯೇಕ ರಾಜ್ಯ ಬೇಕಂತೆಬೆಳಗಾವಿ (ಸುವರ್ಣಸೌಧ): ಉಮೇಶ ಕತ್ತಿ ಅವರ ಹೊಟ್ಟೆ ನೋವಿನ ಪ್ರತ್ಯೇಕ ರಾಜ್ಯ ಬೇಡಿಕೆ ಹೇಳಿಕೆ ಪ್ರಸ್ತುತವಾಗಿದೆ ಎಂದು ಸದಸ್ಯ ಬಸವರಾಜ ಹೊರಟ್ಟಿ ಪರಿಷತನಲ್ಲಿ ತಿಳಿಸಿದರು.
ಏನೂ ಇಲ್ಲಗಳ ನಗರ ಹುಬ್ಬಳ್ಳಿ ಧಾರವಾಡ. ಅವಳಿ ನಗರ ಈಗ ಹಳ್ಳಿಯಾಗಿ ಬದಲಾಗುತ್ತಿದೆ. ಉತ್ತರ ಕರ್ನಾಟಕದ ನಗರಗಳು ಮತ್ತು ಪ್ರದೇಶ ಅಭಿವೃದ್ಧಿ ಆಗುತ್ತಿಲ್ಲ. ಅಭಿವೃದ್ಧಿ ಆಗದ್ದರಿಂದ ಕೆಳಮನೆ ಸದಸ್ಯ ಉಮೇಶ ಕತ್ತಿ ಹೇಳಿಕೆ ಸರಿಯಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಕುಡಿಯುವ ನೀರಿಲ್ಲ, ಟ್ರಾಫಿಕ್ ಸರಿ ಇಲ್ಲ, ಹಂದಿ- ನಾಯಿ ಕಾಡಾಟ, ಉಣಕಲ್ ಕೆರೆ ವಾಸಬೆ ಎದ್ದಿದೆ, ರಸ್ತೆಗಳು ಸರಿ ಇಲ್ಲ. ಸರಕಾರದ ಹಣ ಖರ್ಚಾಗಿ ಎಲ್ಲಿ ಹೋಗುತ್ತಿದೆ. ಕನಿಷ್ಠ 40 ಪ್ರತಿಶತ ಭ್ರಷ್ಟಾಚಾರ ನಡೆಯುತ್ತಿದೆ. ಯಾರಿಗೂ ಹೆದರಿಕೆ ಇಲ್ಲ. ಯಲ್ಲಪ್ಪ ಬೆಂಳಕರ ಎಂಬ ಗುತ್ತಿಗೆದಾರ ಎಲ್ಲರಿಗೂ ಭ್ರಷ್ಟಾಚಾರ ಹಣ ತಲುಪಿಸುತ್ತಿದ್ದಾನೆ ಎಂದರು.

ಅಖಂಡ ರಾಜ್ಯ ಇರಬೇಕು ಎನ್ನುವುದು ನಿಜ, ನಮ್ಮ ಆಶಯ ಕೂಡ. ಆದರೆ ಈ ಭಾಗದ ಜಿಲ್ಲೆ ನಗರಗಳು ಅಭಿವೃದ್ಧಿ ಆಗದಿದ್ದರೆ ಹೇಗೆ. ಆದ್ದರಿಂದ ರಾಜ್ಯ ಪ್ರತ್ಯೇಕ ಬೇಡಿಕೆ ಪ್ರಸ್ತುತ ಅಂತ ನನಗೂ ಅನಿಸುತ್ತದೆ. ಧಾರವಾಡ ಹುಬ್ಬಳ್ಳಿ ಸಮಗ್ರ ಅಭಿವೃದ್ಧಿ ಆಗಬೇಕು. ಮಿಲಿಟರಿ ಹಿನ್ನಲೆಯ ದಕ್ಷ ಅಧಿಕಾರಿ ಹುಬ್ಬಳ್ಳಿ ಧಾರವಾಡ ಕಮಿಷ್ನರ್ ಆಗಿದ್ದಾರೆ. ಆದರೆ ಅವರನ್ನು ಎತ್ತಂಗಡಿ ಮಾಡಿಸಲು ರಾಜಕಾರಣಿಗಳು, ಮಾಫಿಯಾಗಳು ಸರಕಾರಕ್ಕೆ ಪತ್ರ ಬರೆದು ಬೆನ್ನುಬಿದ್ದಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಅಧೋಗತಿಯನ್ನು ಎಳೆ ಎಳೆ ಅನಾವರಣ ಬಸವರಾಜ ಹೊರಟ್ಟಿ ಪರಿಷತನಲ್ಲಿ ಬಿಡಿಸಿಟ್ಟು, ಶಾಸಕ ಉಮೇಶ ಕತ್ತಿ ಪ್ರತ್ಯೇಕ ರಾಜ್ಯ ಬೇಡಿಕೆ ನಿಜವಾಗಲೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು.

Post Top Ad

Responsive Ads Here